ಬಾಳೆಂಬ ಹೆಮ್ಮರದಲಿ
ಚಿಗುರೊಡೆದಿದೆ ಹೊಸ ಆಸೆ
ಮನವೆಂಬ ಆಗಸದಲಿ
ಹೊಸದೊಂದು ಸೂರ್ಯೋದಯ
ಮೊಟ್ಟೆಯೊಡೆದ ಮರಿಗೆ
ಹೊಸತನದ ಬೆಳಕು
ಹಸಿದ ಹಕ್ಕಿಯ ಬಾಯ್ಗೆ
ಗುಟುಕಿನ ಕಾಳು
ಹಕ್ಕಿಗಳು ಹಾಡುತಲಿವೆ
ಸಾಂತ್ವನದ ಹಾಡು
ಪುಟ್ಟ ಜೀವಕೆ ಕೊಟ್ಟಿವೆ
ಆರೈಕೆಯ ಸೂರು
ಆಡುತಿವೆ ಹಕ್ಕಿಗಳು
ಒಂದಾಗಿ ಸೇರಿ
ಕಾಮನ ಬಿಲ್ಲೊಂದು
ಕಾಣುತಿದೆ ಅಲ್ಲಿ
ಹಾಡುತಲಿದೆ ಕೋಗಿಲೆಯು
ಮಾವಿನ ಚಿಗುರುಂಡು
ಗರಿಬಿಚ್ಚಿದೆ ನವಿಲು
ಸಂವೃದ್ಧಿಯಾ ಕಂಡು
ಜೀವವು ಬಂದಿದೆ ಜೀವನಕೆ
ಹೊಸತನ ಬಂದಿದೆ ಆಲೋಚನೆಗೆ